ಈ ಲೇಖವನ್ನು ಕೃಷಿಯ ಬಗ್ಗೆ ಎಂದು ನಿರೀಕ್ಷಿಸಿದವರಿಗೆ ಇದು ಆಹಾರ, ಆರೋಗ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತಾಗಿರುವ ಗ್ರಂಥವೆಂದು ಕಂಡುಬಂದರೆ ಆಶ್ಚರ್ಯವಿಲ್ಲ. ತಾತ್ವಿಕ ವಿಚಾರಧಾರೆ ಎಂಬ ವದಂತಿ ಕೇಳಿ ಈ ಬ್ಲಾಗ್ ಹುಡುಕುವವರಿಗೆ ಇಲ್ಲಿ ತರಕಾರಿ, ಭತ್ತ, ಕಿತ್ತಳೆ ಬೆಳೆಯ ಕುರಿತ ವಿವರಗಳೂ ಕಂಡುಬಂದಾವು. ಈ ರೂಢಿಗತ ನಿರೀಕ್ಷೆಯ ಕಾರಣದಿಂದಲೇ ಈ ಲೇಕಾನಿ ಗಮನಾರ್ಹ. ಏಕೆಂದರೆ ನಾವು ಸಾಧಕರನ್ನು ವಿಶೇಷಜ್ಞರೆಂದೂ, ಒಂದು ಪುಸ್ತಕ ಒಂದೇ ವಿಷಯವನ್ನು ಕುರಿತಾಗಿರುತ್ತದೆಂದೂ ನಿರೀಕ್ಷೆಯಲ್ಲಿ ಬೆಳೆದಿದ್ದೇವೆ. 'ಒಂದು ಹುಲ್ಲಿನ ಕ್ರಾಂತಿ* ಏಕಕಾಲಕ್ಕೆ ಪ್ರಾಯೋಗಿಕ ಮಹಿಮೆ ಮತ್ತು ತಾತ್ವಿಕ ವಿಚಾರಧಾರೆಗಳೆರಡನ್ನೂ ಹೆಣೆದುಕೊಂಡಿದೆ. ಕೃಷಿ ಕುರಿತಾದ ಅತ್ಯಾವಶ್ಯಕ ಪುಸ್ತಕ ಇದು, ಏಕೆಂದರೆ ಇದು ಕೇವಲ ಕೃಷಿ ಕುರಿತಾಗಿ ಇಲ್ಲ. ನಮ್ಮ ನೆಲಕ್ಕೆ ಪುಕುವೊಕಾರ ತಂತ್ರಗಳನ್ನು ನೇರವಾಗಿ ಇಳಿಸುವುದು ಕಷ್ಟಸಾಧ್ಯವೆಂಬುದು ನಮ್ಮ ಪ್ರಾಜ್ಞ ಓದುಗರಿಗೆ ಅರಿವಾದೀತು. ಆದರೆ ನಮ್ಮ ನೆಲ, ಹವೆ, ಬೆಳೆಗಳನ್ನು ಹೊಸ ಕುತೂಹಲ, ಮುಕ್ತ ದೃಷ್ಟಿ ಮತ್ತು ಸರಿಯಾದ ಕಾಳಜಿಯಿಂದ ಅಧ್ಯಯನ ಮಾಡಿದಲ್ಲಿ ಬಹಳಷ್ಟು ಸಾಧಿಸಬಹುದು ಎಂಬುದನ್ನು ಈ ಗ್ರಂಥ ಕಲಿಸಿಕೊಡುತ್ತದೆ. ಧ್ವನಿತಾರ್ಥ ಮತ್ತು ಸ್ಫೂರ್ತಿ ಎರಡನ್ನೂ ನೀಡುವ ಕೃತಿ ಇದು. ಇದನ್ನು ಓದುವ ರೈತನೊಬ್ಬ ಸತತವಾಗಿ ಈ ಪುಸ್ತಕದಲ್ಲಿಯ ಕೃಷಿಯ ವಿವರಗಳು ತನ್ನ ಹೊಲಗದ್ದೆಗೆ, ಅಲ್ಲಿಂದ ತನ್ನ ಇಡೀ ಕೃಷಿ
ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMINGTHE
ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMINGTHE Jan 24, 2024 Agriculture , Blog #tractor #agriculture #farm #johndeere #farming #farmer #fendt #newholland #tractors #farmlife #traktor #masseyferguson #landwirtschaft #claasr ಮಸನೊಬು ಫುಕುವೊಕ ಭೂಮಿಯ ಆರೋಗ್ಯ ದಿನ ದಿನಕ್ಕೆ ಹದಗೆಡುತ್ತಿದೆ. ನಿಸರ್ಗವನ್ನು ಬಗ್ಗುಬಡಿದೇ ಅಭಿವೃದ್ಧಿ ಸಾಧಿಸ ಹೊರಟ ಆಧುನಿಕ ಮಾನವನ ದಾಳಿಗೆ ನೆಲ ನಲುಗಿದೆ. ಗಿಜಿಗುಡುವ ೫೦೦ ಕೋಟಿ ಜನರ ಆಸೆ – ದುರಾಸೆಗಳ ಪೂರೈಕೆಗೆಂದು ಗಾಳಿ, ನೀರು, ಮಣ್ಣು, ಅಂತರ್ಜಲವಷ್ಟೇ ಅಲ್ಲ ದೂರದ ಹಿಮಖಂಡಗಳೂ ಕಲುಷಿತವಾಗುತ್ತಿವೆ. ಅಂತರಿಕ್ಷದ ojaನ್ ರಕ್ಷಾ ಕವಚವೂ ಛಿದ್ರವಾಗುತ್ತಿದೆ. ಇತಿಮಿತಿ ಮೀರಿದ ಈ ಮಾನವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ವಿಚಾರ ಕೆಲವರಲ್ಲಿ ಇದೀಗ ಮೂಡುತ್ತಿರುವಾಗ ೨೫ ವರ್ಷಗಳ ಹಿಂದೆಯೇ ಜ್ಞಾನೋದಯ ಪಡೆದವರು ಜಪಾನಿನ ವಿಜ್ಞಾನಿಕೃಷಿಕ ಮಸನೊಬು ಫುಕುವೊಕ. ಹಾಗೆಂದು ಇವರು ಆಶ್ರಮ ಕಟ್ಟಿಕೊಂಡು ಧ್ಯಾನ ನಿರತರಾಗಿ, ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದವರಲ್ಲ; ಅಥವಾ ಬಾಯಿಮಾತಿನ ಉಪದೇಶ ಸಾರುತ್ತ ಊರೂರು ಸುತ್ತಿದವರಲ್ಲ. ರೋಗಗ್ರಸ್ತ ನಿಸರ್ಗಕ್ಕೆ ಚಿಕಿತ್ಸೆ ನೀಡುತ್ತ, ಉಪಚಾರ ಮಾಡುತ್ತ, ಸಾಂತ್ವನ ಹೇಳುತ್ತ ಕೃಷಿಭೂಮಿಗೆ ಗೆಲುವನ್ನು ತಂದು ಕೊಟ್ಟವರು ಇವರು. ಉಳುಮೆ, ರಸಗೊಬ್ಬರ,