Organic Farming: ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ? ಹಾಗಿದ್ರೆ ಕೃಷಿ ವಿಜ್ಞಾನ ಕೇಂದ್ರವೇ ತರಬೇತಿ ನೀಡ್ತಿದೆ ನೋಡಿ
ಆದರೆ ಈಗ ಕೃಷಿ ವಿಜ್ಞಾನ ಕೇಂದ್ರವು ಸಮಸ್ಯೆಯನ್ನು ಪರಿಹರಿಸಿರುವುದರಿಂದ ಅವರು ಚಿಂತಿಸುವ ಅಗತ್ಯವಿಲ್ಲ. ದೇಶಾದ್ಯಂತದ ವಿವಿಧ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಗಳು ಸಾವಯವ ಕೃಷಿ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿವೆ. ಸಾವಯವ ಕೃಷಿಯ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಉಳ್ಳವರು ಮತ್ತು ಕಲಿಯಲು ಬಯಸುವ ರೈತರು ತಮ್ಮ ಹತ್ತಿರದ ಕೆವಿಕೆಯನ್ನು ಸಂಪರ್ಕಿಸಬಹುದು.
ಸಾಮಾನ್ಯವಾಗಿ ನಮ್ಮ ಹಿರಿಯ ರೈತರು ಹಳೆಯ ವ್ಯವಸಾಯ ಪದ್ದತಿಗಳನ್ನೇ ಅನುಸರಿಸಿಕೊಂಡು ಕೃಷಿಯನ್ನು (Agriculture) ಮಾಡುತ್ತಿರುತ್ತಾರೆ ಮತ್ತು ವರ್ಷಕ್ಕೆ ಒಂದೆರಡು ಬೆಳೆಗಳನ್ನು (Crops) ಅವರ ಹೊಲದಲ್ಲಿ ಬೆಳೆದು ಕೃಷಿ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಚೆನ್ನಾಗಿ ಓದಿಕೊಂಡು ಕೃಷಿಯನ್ನು ಮಾಡಲು ಶುರು ಮಾಡಿರುವ ಯುವಕರು ಈ ಹಳೆಯ ಕೃಷಿ ಪದ್ದತಿಯನ್ನು (Old farming system) ಬಿಟ್ಟು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಒಂದೆರಡು ಬೆಳೆಗಳನ್ನು ನಂಬಿಕೊಂಡು ಕೂರದೇ ಅನೇಕ ರೀತಿಯ ಬೆಳೆಗಳನ್ನು ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದಿನದಿಂದ ದಿನಕ್ಕೆ ಸಾವಯವ ಕೃಷಿಯು (Organic Farming) ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಆದರೆ ಅನೇಕ ರೈತರು ಇನ್ನೂ ಈ ಸಾವಯವ ಕೃಷಿಯ ಮೂಲಭೂತ ಅಂಶಗಳನ್ನು ತಿಳಿದಿಲ್ಲ.