Skip to main content

arecunut diseases yellow leaf diseases / ಅಡಿಕೆ ರಕ್ಷಣೆಗೆ ಸಾವಯುವ ಪರಿಹಾರ ಯಾವುದೇ ರಸಾಯನಿಕ ಬಳಸದೆ ಕೊಳೆ ರೋಗ ತಡೆಗಟ್ಟು ಬಹುದು

ಅಡಿಕೆ ರಕ್ಷಣೆಗೆ ಸಾವಯವ ಪರಿಹಾರ: ಯಾವುದೇ ರಾಸಾಯನಿಕ ಬಳಸದೆ ಕೊಳೆರೋಗ ತಡೆಗಟ್ಟಿದ ರೈತನ ಯಶೋಗಾಥೆ :

ಸಾಮಾನ್ಯವಾಗಿ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸುವುದನ್ನು ತಡೆಯಲು ಸುಣ್ಣ ಮತ್ತು ಮೈಲುತುತ್ತ ಮಿಶ್ರಿತ ಬೋರ್ಡೊ ದ್ರಾವಣ ಸಿಂಪಡಿಸುವುದು ನಿಮಗೆಲ್ಲ ತಿಳಿದೇ ಇದೆ. ಆದರೆ ನಂದಿಗ್ರಾಮ ದ ದ್ಯಾಮಣ್ಣ  ಎನ್ನುವ ರೈತರೊಬ್ಬರು ಸಾವಯವ ಔಷಧಿ ಸಿಂಪಡಿಸಿ ಕಳೆದ ನಾಲ್ಕೈದು ವರ್ಷಗಳಿಂದ ಕೊಳೆರೋಗವನ್ನು ನಿಯಂತ್ರಿಸುತ್ತಿದ್ದಾರೆ.

ಇದಕ್ಕಾಗಿ ಹುಳಿ ಮಜ್ಜಿಗೆ, ಜೀವಾಮೃತ, ಬಯೋಮಾಸ್ಕ್ ಈ ಮೂರು ತರಹದ ದ್ರಾವಣವನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಿರುವ ರಾಮಚಂದ್ರ ಅವರು ತಮ್ಮ ನಾಲ್ಕೂವರೆ ಎಕರೆ ಅಡಿಕೆ ತೋಟಕ್ಕೆ ಹಾಗೂ ಕಾಳುಮೆಣಸಿನ ಬಳ್ಳಿಗೆ ಸಿಂಪಡಿಸುತ್ತಿದ್ದಾರೆ.

ಪ್ರತಿ ಮಳೆಗಾಲದ ಸಂದರ್ಭದಲ್ಲಿ ಮಲೆನಾಡು ಭಾಗದ ರೈತರಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸುವುದೇ ದೊಡ್ಡ ಚಿಂತೆಯಾಗಿದೆ. ಬೋರ್ಡೊ ದ್ರಾವಣದ ಹೊರತಾಗಿಯೂ ಹಲವು ರಾಸಾಯನಿಕ ಔಷಧಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇದ್ಯಾವುದರ ಮೊರೆಯೂ ಹೋಗದೆ, ಸಾವಯವ ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಳ್ಳಲು ಧೈರ್ಯ ತೋರಿಸುವ ಮೂಲಕ ನಂದಿ ಗ್ರಾಮ ದ ದ್ಯಾಮಣ್ಣ ರೈತ ವಲಯದ ಅಚ್ಚರಿ ಎನಿಸಿದ್ದಾರೆ.

ಈ ಬಗ್ಗೆ ಇವರು ಹೇಳುವುದು ಹೀಗೆ, ‘2019ರಲ್ಲಿ ಕೊಳೆರೋಗ ತಡೆಗಟ್ಟಲು ಸಾವಯವ ದ್ರಾವಣದ ಪ್ರಯೋಗ ನಡೆಸಲು ಆರಂಭಿಸಿದೆ. ತೋಟವನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿಕೊಂಡು ಆಯಾ ವಿಭಾಗದ ಮರಗಳಿಗೆ ಹುಳಿ ಮಜ್ಜಿಗೆ, ಜೀವಾಮೃತ, ಬಯೋಮಾಸ್ಕ್ ಸಿಂಪಡಿಸಿದೆ. ನಾಲ್ಕನೇ ವಿಭಾಗಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಿದೆ. ಆದರೆ ಬೋರ್ಡೊ ದ್ರಾವಣ ಸಿಂಪಡಿಸಿದ ಭಾಗದಲ್ಲಿ ಕೊಳೆರೋಗ ನಿಯಂತ್ರಣ ಸಾಧ್ಯವಾಗಲಿಲ್ಲ. ಜತೆಗೆ ಮರಗಳು ಹಾನಿಗೀಡಾದವು’ ಎಂದು ಹೇಳುತ್ತಾರೆ ಕೃಷಿಕ ದ್ಯಾಮಣ್ಣ 

ಅಡಿಕೆ ಮರಗಳ ಆರೈಕೆಗೆ ಅವಶ್ಯವಾಗಿರುವ ಅರೋಬಿಕ್ ಬ್ಯಾಕ್ಟೀರಿಯಾಗಳು ಉಳಿದ ಮೂರು ಪ್ರಕಾರದ ದ್ರಾವಣದಿಂದ ಲಭಿಸಿದವು, ಹೀಗಾಗಿ ಉತ್ತಮ ಪೋಷಣೆ ದೊರೆತು ಮರಗಳು ಆರೋಗ್ಯಯುತವಾಗಿ ಬೆಳೆದಿವೆ. ನಾಲ್ಕು ವರ್ಷದಿಂದ ಕೊಳೆರೋಗ ನಿಯಂತ್ರಣವಾಗಿರುವ ಜತೆಗೆ ಅಡಿಕೆ ಇಳುವರಿಯೂ ಸ್ಥಿರವಾಗಿದೆ. ಸಾವಯವ ದ್ರಾವಣದಿಂದ ಹಾನಿಕಾರಕ ಬ್ಯಾಕ್ಟಿರಿಯಾ ನಿಯಂತ್ರಣವಾಗುವುದರ ಕುರಿತು ತಜ್ಞರಿಂದಲೂ ಪರೀಕ್ಷಿಸಿದ್ದೇನೆ’ ಎನ್ನುತ್ತಾರೆ ರಾಮಚಂದ್ರ ಅವರು.

80:20 ಅನುಪಾತದಲ್ಲಿ ಹುಳಿ ಮಜ್ಜಿಗೆ ಹಾಗೂ ನೀರು ಮಿಶ್ರಣ ಮಾಡಿದ ದ್ರಾವಣದ ಸಿಂಪಡಣೆ ಕೃಷಿಕ ರಾಮಚಂದ್ರ ಅವರ ಮೊದಲ ಆಯ್ಕೆಯಾಗಿದೆ. ಪ್ರತಿ 200 ಲೀ. ನೀರಿಗೆ ತಲಾ 5 ಲೀ. ಗೋಮೂತ್ರ, 10 ಕೆ.ಜಿ.ಯಷ್ಟು ಸಗಣಿ, ತಲಾ 2 ಕೆ.ಜಿ.ಯಷ್ಟು ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ ಮತ್ತು ಎರಡು ಮುಷ್ಠಿಯಷ್ಟು ಮಣ್ಣು ಮಿಶ್ರಣ ಮಾಡಿ ಜೀವಾಮೃತವನ್ನೂ ಸಿಂಪಡಿಸುತ್ತಿದ್ದಾರೆ. ತರಕಾರಿ ಅಥವಾ ಕೆಲವು ಕಾಯಿಗಳನ್ನು ಕೊಳೆಯಿಸಿ ತಯಾರಿಸಿದ 3 ಕೆ.ಜಿ. ಹಸಿದ್ರವ್ಯಕ್ಕೆ 10 ಲೀ. ನೀರು ಮತ್ತು 1 ಕೆ.ಜಿ. ಬೆಲ್ಲ ಬೆರೆಸಿ ಸಿದ್ಧಪಡಿಸಿದ ಬಯೋಮಾಸ್ಕ್ ಕೂಡ ರೋಗ ನಿಯಂತ್ರಣಕ್ಕೆ ಉಪಕಾರಿಯಾಗಿದೆ ಎನ್ನುತ್ತಾರೆ 
ಸಾಮಾನ್ಯವಾಗಿ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಉತ್ಪಾದಕ ಶಕ್ತಿ ಕಡಿಮೆಯಾಗುತ್ತಿರುವುದನ್ನು ಬಹಳ ವರ್ಷದಿಂದ ಗಮನಿಸುತ್ತಿದ್ದೇವೆ. ಹಾಗಾಗಿ ಸಾವಯವ ಪದ್ಧತಿ ಸುರಕ್ಷಿತ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕಿದೆ, ಇದರ ಬಗ್ಗೆ ಅರಿವು ಮೂಡಿಸಬೇಕಿದೆ.

Apple plant ಉಷ್ಣವಲಯದಲ್ಲಿ ಬೆಳೆಯುವುದು ಅಂತ ಸೇಬು ಹಣ್ಣಿನ ಗಿಡ ಕರಿದಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ apple plant

Popular posts from this blog

ಜೇನು ಸಾಕಾಣಿಕೆ

ಜೇನು ಸಾಕಾಣಿಕೆ ತೋಟಗಾರಿಕೆ ಬೆಳೆಗಳಲ್ಲಿ ಪರಾಗ ಸ್ಪರ್ಶವನ್ನು ಹೆಚ್ಚಿಸಲು ಜೇನುಕಲ್ಲು ಜೇನುಪೆಟ್ಟಿಗೆ ಹಾಗೂ ಜೇನುಗಾರಿಕೆಗೆ  ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇಕಡ 40ರಂತೆ 1600 ಜೇನು ಕಾಲೋನಿ ಮತ್ತು ಜೇನುಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8000 ರೂ ವರೆಗೆ ಸಹಾಯಧನ ನೀಡಲಾಗುತ್ತದೆ.

ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ?

 Organic Farming: ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ? ಹಾಗಿದ್ರೆ ಕೃಷಿ ವಿಜ್ಞಾನ ಕೇಂದ್ರವೇ ತರಬೇತಿ ನೀಡ್ತಿದೆ ನೋಡಿ ಆದರೆ ಈಗ ಕೃಷಿ ವಿಜ್ಞಾನ ಕೇಂದ್ರವು ಸಮಸ್ಯೆಯನ್ನು ಪರಿಹರಿಸಿರುವುದರಿಂದ ಅವರು ಚಿಂತಿಸುವ ಅಗತ್ಯವಿಲ್ಲ. ದೇಶಾದ್ಯಂತದ ವಿವಿಧ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಗಳು ಸಾವಯವ ಕೃಷಿ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿವೆ. ಸಾವಯವ ಕೃಷಿಯ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಉಳ್ಳವರು ಮತ್ತು ಕಲಿಯಲು ಬಯಸುವ ರೈತರು ತಮ್ಮ ಹತ್ತಿರದ ಕೆವಿಕೆಯನ್ನು ಸಂಪರ್ಕಿಸಬಹುದು. ಸಾಮಾನ್ಯವಾಗಿ ನಮ್ಮ ಹಿರಿಯ ರೈತರು ಹಳೆಯ ವ್ಯವಸಾಯ ಪದ್ದತಿಗಳನ್ನೇ ಅನುಸರಿಸಿಕೊಂಡು ಕೃಷಿಯನ್ನು (Agriculture) ಮಾಡುತ್ತಿರುತ್ತಾರೆ ಮತ್ತು ವರ್ಷಕ್ಕೆ ಒಂದೆರಡು ಬೆಳೆಗಳನ್ನು (Crops) ಅವರ ಹೊಲದಲ್ಲಿ ಬೆಳೆದು ಕೃಷಿ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಚೆನ್ನಾಗಿ ಓದಿಕೊಂಡು ಕೃಷಿಯನ್ನು ಮಾಡಲು ಶುರು ಮಾಡಿರುವ ಯುವಕರು ಈ ಹಳೆಯ ಕೃಷಿ ಪದ್ದತಿಯನ್ನು (Old farming system) ಬಿಟ್ಟು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಒಂದೆರಡು ಬೆಳೆಗಳನ್ನು ನಂಬಿಕೊಂಡು ಕೂರದೇ ಅನೇಕ ರೀತಿಯ ಬೆಳೆಗಳನ್ನು ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದಿನದಿಂದ ದಿನಕ್ಕೆ ಸಾವಯವ ಕೃಷಿಯು (Organic Farming) ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಆದರೆ ಅನೇಕ ರೈತರು ಇನ್ನೂ ಈ

ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMING JAPANESE FAMOUS BOOK

  ಈ ಲೇಖವನ್ನು   ಕೃಷಿಯ ಬಗ್ಗೆ    ಎಂದು ನಿರೀಕ್ಷಿಸಿದವರಿಗೆ ಇದು ಆಹಾರ, ಆರೋಗ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತಾಗಿರುವ ಗ್ರಂಥವೆಂದು ಕಂಡುಬಂದರೆ ಆಶ್ಚರ್ಯವಿಲ್ಲ. ತಾತ್ವಿಕ ವಿಚಾರಧಾರೆ ಎಂಬ ವದಂತಿ ಕೇಳಿ ಈ ಬ್ಲಾಗ್  ಹುಡುಕುವವರಿಗೆ ಇಲ್ಲಿ ತರಕಾರಿ, ಭತ್ತ, ಕಿತ್ತಳೆ ಬೆಳೆಯ ಕುರಿತ ವಿವರಗಳೂ ಕಂಡುಬಂದಾವು. ಈ ರೂಢಿಗತ ನಿರೀಕ್ಷೆಯ ಕಾರಣದಿಂದಲೇ ಈ ಲೇಕಾನಿ ಗಮನಾರ್ಹ. ಏಕೆಂದರೆ ನಾವು ಸಾಧಕರನ್ನು ವಿಶೇಷಜ್ಞರೆಂದೂ, ಒಂದು ಪುಸ್ತಕ ಒಂದೇ ವಿಷಯವನ್ನು ಕುರಿತಾಗಿರುತ್ತದೆಂದೂ ನಿರೀಕ್ಷೆಯಲ್ಲಿ ಬೆಳೆದಿದ್ದೇವೆ. 'ಒಂದು ಹುಲ್ಲಿನ ಕ್ರಾಂತಿ* ಏಕಕಾಲಕ್ಕೆ ಪ್ರಾಯೋಗಿಕ ಮಹಿಮೆ ಮತ್ತು ತಾತ್ವಿಕ ವಿಚಾರಧಾರೆಗಳೆರಡನ್ನೂ ಹೆಣೆದುಕೊಂಡಿದೆ. ಕೃಷಿ ಕುರಿತಾದ ಅತ್ಯಾವಶ್ಯಕ ಪುಸ್ತಕ ಇದು, ಏಕೆಂದರೆ ಇದು ಕೇವಲ ಕೃಷಿ ಕುರಿತಾಗಿ ಇಲ್ಲ. ನಮ್ಮ ನೆಲಕ್ಕೆ ಪುಕುವೊಕಾರ ತಂತ್ರಗಳನ್ನು ನೇರವಾಗಿ ಇಳಿಸುವುದು ಕಷ್ಟಸಾಧ್ಯವೆಂಬುದು ನಮ್ಮ ಪ್ರಾಜ್ಞ ಓದುಗರಿಗೆ ಅರಿವಾದೀತು. ಆದರೆ ನಮ್ಮ ನೆಲ, ಹವೆ, ಬೆಳೆಗಳನ್ನು ಹೊಸ ಕುತೂಹಲ, ಮುಕ್ತ ದೃಷ್ಟಿ ಮತ್ತು ಸರಿಯಾದ ಕಾಳಜಿಯಿಂದ ಅಧ್ಯಯನ ಮಾಡಿದಲ್ಲಿ ಬಹಳಷ್ಟು ಸಾಧಿಸಬಹುದು ಎಂಬುದನ್ನು ಈ ಗ್ರಂಥ ಕಲಿಸಿಕೊಡುತ್ತದೆ. ಧ್ವನಿತಾರ್ಥ ಮತ್ತು ಸ್ಫೂರ್ತಿ ಎರಡನ್ನೂ ನೀಡುವ ಕೃತಿ ಇದು. ಇದನ್ನು ಓದುವ ರೈತನೊಬ್ಬ ಸತತವಾಗಿ ಈ ಪುಸ್ತಕದಲ್ಲಿಯ ಕೃಷಿಯ ವಿವರಗಳು ತನ್ನ ಹೊಲಗದ್ದೆಗೆ, ಅಲ್ಲಿಂದ ತನ್ನ ಇಡೀ ಕೃಷಿ