Skip to main content

tissue culture arecanut ಅಂಗಾಂಶ ಕಸಿ ಅಡಿಕೆ ಸಸಿಗಳು

ಅಡಿಕೆಗೆ ಎದುರಾಗುವ ಹಳದಿ ಎಲೆ ರೋಗ ನಿರೋಧಕ ಅಂಗಾಂಶ ಕಸಿ ತಳಿ: 

ಕಾಸರಗೋಡಿನ ಸಿಪಿಸಿಆರ್‌ಐಯಲ್ಲಿ ಅಡಿಕೆ ಎಲೆ ಹಳದಿ ರೋಗ ನಿರೋಧಕ ಗುಣವುಳ್ಳ ಅಂಗಾಂಶ ಕಸಿ ತಳಿ ಅಭಿವೃದ್ಧಿ ನಡೆಯುತ್ತಿದ್ದು, ಸಧ್ಯ ಗಿಡದ ಒಂದು ಹಂತ ಪೂರ್ಣವಾಗಿದೆ.

ಸುಮಾರು ಎರಡು ವರ್ಷಗಳ ಹಿಂದೆ ಕಾಸರ ಗೋಡು ಸಿಪಿಸಿಆರ್‌ಐ ವಿಜ್ಞಾನಿ ಗಳು ಅಡಿಕೆ ಎಲೆ ಹಳದಿ ರೋಗ ಬಾಧಿತವಾಗಿರುವ ಪ್ರದೇಶಗಳಲ್ಲಿ ಉಳಿದಿರುವ ಬೆರಳೆಣಿಕೆಯ ಕೆಲವು ಆರೋಗ್ಯಯುತ ಅಡಿಕೆ ಮರಗಳಿಂದ ಎಳೆ ಹಿಂಗಾರ ಸಂಗ್ರಹಿಸಿ ಅಡಿಕೆ ಹಳದಿ ಎಲೆ ರೋಗ ನಿರೋಧಕ ಗುಣವುಳ್ಳ ಅಂಗಾಂಶ ಕಸಿ ತಳಿ ಅಭಿವೃದ್ಧಿ ಮಾಡುವ ಪ್ರಯತ್ನ ಆರಂಭಿಸಿದ್ದರು. ಈದೀಗ ಅಭಿವೃದ್ಧಿ ಪಡಿಸಿದ ತಳಿ ಪ್ರಯೋಗಾಲಯದಲ್ಲಿ ಬೆಳೆಯುತ್ತಿದ್ದು, ಯಶಸ್ಸಿನ ನಿರೀಕ್ಷೆ ಮೂಡಿಸಿದೆ.

ಅಡಿಕೆಗೆ ಎದುರಾಗುವ ಹಳದಿ ಎಲೆ ರೋಗ ನಿರೋಧಕ ಗುಣವುಳ್ಳ ತಳಿ ಅಭಿವೃದ್ಧಿಯ ವಿಧಾನದ ಬಗ್ಗೆ ಎರಡು ವರ್ಷಗಳಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಪ್ರಯತ್ನ ನಡೆಸುತ್ತಲೇ ಇತ್ತು. ಅಂಗಾಂಶ ಕಸಿಗಾಗಿ ಸಂಪಾಜೆ, ಅರಂತೋಡು, ಚೆಂಬು ಹಾಗೂ ಶೃಂಗೇರಿಗಳಿಂದ ಆರೋಗ್ಯಯುತ ಮರಗಳ ಎಳೆ ಹಿಂಗಾರವನ್ನು ಸಂಗ್ರಹಿಸಿದ್ದರು, ನಂತರ ಇದನ್ನು ಅಂಗಾಂಶ ಕಸಿ ವಿಧಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದರು.

ಇದುವರೆಗೆ ಅಂಗಾಂಶ ಕಸಿ ಮಾಡುವ ವಿಧಾನ ಅಡಿಕೆ ಮತ್ತು ತೆಂಗಿನಲ್ಲಿ ಪರಿಣಾಮಕಾರಿಯಾಗಿ ಸಾಧ್ಯವಾಗಿರಲಿಲ್ಲ. ಆದರೆ ಈಗ ಸಿಪಿಸಿಆರ್‌ಐ ವಿಜ್ಞಾನಿಗಳು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ, ತೀರಾ ನಿಧಾನವಾದ ಮತ್ತು ಸೂಕ್ಷ್ಮವಾದ ಕಾರ್ಯ ಇದಾಗಿದ್ದು, ವಿಜ್ಞಾನಿಗಳ ತಂಡ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಇದು ಗಿಡವಾಗಿ ರೂಪುಗೊಳ್ಳಲು ಇನ್ನೂ ಕನಿಷ್ಠ ಎರಡು ವರ್ಷಗಳ ಕಾಲ ಬೇಕಾಗುತ್ತದೆ.

ಅಂಗಾಂಶ  tissue culture arecanut ಕಸಿ ವಿಧಾನದಲ್ಲಿ ಈಗಾಗಲೇ ಗಿಡದ ಒಂದು ಹಂತ ಸಿದ್ಧವಾಗಿದ್ದು, ಗಿಡ ಇನ್ನಷ್ಟೇ ಬೇರು ಹಾಗೂ ಎಲೆಗಳ ಹಂತಕ್ಕೆ ಬೆಳೆಯಬೇಕಿದೆ. ಪ್ರತೀ ಹಂತದಲ್ಲೂ ತುಂಬಾ ಎಚ್ಚರಿಕೆ ಹಾಗೂ ಆರೈಕೆಯ ಅಗತ್ಯವಿರುವುದರಿಂದ ಇಡೀ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ. 

ಅಂಗಾಂಶ ಕಸಿ ವಿಧಾನದಲ್ಲಿ ಎಲ್ಲ ಮರಗಳ ಹಿಂಗಾರವೂ ಒಂದೇ ವೇಗದಲ್ಲಿ ಬೆಳೆಯಲು ಸಾಧ್ಯವಿಲ್ಲದ ಕಾರಣ ಸಾಕಷ್ಟು ಮಾದರಿಗಳ ಅಗತ್ಯವಿರುತ್ತದೆ. ಎರಡು ವರ್ಷಗಳ ನಂತರ ಗಿಡ ತಯಾರಾದರೂ ಅದರ ಬೆಳವಣಿಗೆ ಮತ್ತು ಅಧ್ಯಯನದ ನಂತರವಷ್ಟೇ ಕೃಷಿಕರಿಗೆ ಲಭ್ಯವಾಗಲು ಸಾಧ್ಯವಿದೆ ಎಂದು ಸಿಪಿಸಿಆರ್‌ಐ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Popular posts from this blog

ಜೇನು ಸಾಕಾಣಿಕೆ

ಜೇನು ಸಾಕಾಣಿಕೆ ತೋಟಗಾರಿಕೆ ಬೆಳೆಗಳಲ್ಲಿ ಪರಾಗ ಸ್ಪರ್ಶವನ್ನು ಹೆಚ್ಚಿಸಲು ಜೇನುಕಲ್ಲು ಜೇನುಪೆಟ್ಟಿಗೆ ಹಾಗೂ ಜೇನುಗಾರಿಕೆಗೆ  ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇಕಡ 40ರಂತೆ 1600 ಜೇನು ಕಾಲೋನಿ ಮತ್ತು ಜೇನುಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8000 ರೂ ವರೆಗೆ ಸಹಾಯಧನ ನೀಡಲಾಗುತ್ತದೆ.

ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ?

 Organic Farming: ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ? ಹಾಗಿದ್ರೆ ಕೃಷಿ ವಿಜ್ಞಾನ ಕೇಂದ್ರವೇ ತರಬೇತಿ ನೀಡ್ತಿದೆ ನೋಡಿ ಆದರೆ ಈಗ ಕೃಷಿ ವಿಜ್ಞಾನ ಕೇಂದ್ರವು ಸಮಸ್ಯೆಯನ್ನು ಪರಿಹರಿಸಿರುವುದರಿಂದ ಅವರು ಚಿಂತಿಸುವ ಅಗತ್ಯವಿಲ್ಲ. ದೇಶಾದ್ಯಂತದ ವಿವಿಧ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಗಳು ಸಾವಯವ ಕೃಷಿ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿವೆ. ಸಾವಯವ ಕೃಷಿಯ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಉಳ್ಳವರು ಮತ್ತು ಕಲಿಯಲು ಬಯಸುವ ರೈತರು ತಮ್ಮ ಹತ್ತಿರದ ಕೆವಿಕೆಯನ್ನು ಸಂಪರ್ಕಿಸಬಹುದು. ಸಾಮಾನ್ಯವಾಗಿ ನಮ್ಮ ಹಿರಿಯ ರೈತರು ಹಳೆಯ ವ್ಯವಸಾಯ ಪದ್ದತಿಗಳನ್ನೇ ಅನುಸರಿಸಿಕೊಂಡು ಕೃಷಿಯನ್ನು (Agriculture) ಮಾಡುತ್ತಿರುತ್ತಾರೆ ಮತ್ತು ವರ್ಷಕ್ಕೆ ಒಂದೆರಡು ಬೆಳೆಗಳನ್ನು (Crops) ಅವರ ಹೊಲದಲ್ಲಿ ಬೆಳೆದು ಕೃಷಿ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಚೆನ್ನಾಗಿ ಓದಿಕೊಂಡು ಕೃಷಿಯನ್ನು ಮಾಡಲು ಶುರು ಮಾಡಿರುವ ಯುವಕರು ಈ ಹಳೆಯ ಕೃಷಿ ಪದ್ದತಿಯನ್ನು (Old farming system) ಬಿಟ್ಟು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಒಂದೆರಡು ಬೆಳೆಗಳನ್ನು ನಂಬಿಕೊಂಡು ಕೂರದೇ ಅನೇಕ ರೀತಿಯ ಬೆಳೆಗಳನ್ನು ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದಿನದಿಂದ ದಿನಕ್ಕೆ ಸಾವಯವ ಕೃಷಿಯು (Organic Farming) ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಆದರೆ ಅನೇಕ ರೈತರು ಇನ್ನೂ ಈ

ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMING JAPANESE FAMOUS BOOK

  ಈ ಲೇಖವನ್ನು   ಕೃಷಿಯ ಬಗ್ಗೆ    ಎಂದು ನಿರೀಕ್ಷಿಸಿದವರಿಗೆ ಇದು ಆಹಾರ, ಆರೋಗ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತಾಗಿರುವ ಗ್ರಂಥವೆಂದು ಕಂಡುಬಂದರೆ ಆಶ್ಚರ್ಯವಿಲ್ಲ. ತಾತ್ವಿಕ ವಿಚಾರಧಾರೆ ಎಂಬ ವದಂತಿ ಕೇಳಿ ಈ ಬ್ಲಾಗ್  ಹುಡುಕುವವರಿಗೆ ಇಲ್ಲಿ ತರಕಾರಿ, ಭತ್ತ, ಕಿತ್ತಳೆ ಬೆಳೆಯ ಕುರಿತ ವಿವರಗಳೂ ಕಂಡುಬಂದಾವು. ಈ ರೂಢಿಗತ ನಿರೀಕ್ಷೆಯ ಕಾರಣದಿಂದಲೇ ಈ ಲೇಕಾನಿ ಗಮನಾರ್ಹ. ಏಕೆಂದರೆ ನಾವು ಸಾಧಕರನ್ನು ವಿಶೇಷಜ್ಞರೆಂದೂ, ಒಂದು ಪುಸ್ತಕ ಒಂದೇ ವಿಷಯವನ್ನು ಕುರಿತಾಗಿರುತ್ತದೆಂದೂ ನಿರೀಕ್ಷೆಯಲ್ಲಿ ಬೆಳೆದಿದ್ದೇವೆ. 'ಒಂದು ಹುಲ್ಲಿನ ಕ್ರಾಂತಿ* ಏಕಕಾಲಕ್ಕೆ ಪ್ರಾಯೋಗಿಕ ಮಹಿಮೆ ಮತ್ತು ತಾತ್ವಿಕ ವಿಚಾರಧಾರೆಗಳೆರಡನ್ನೂ ಹೆಣೆದುಕೊಂಡಿದೆ. ಕೃಷಿ ಕುರಿತಾದ ಅತ್ಯಾವಶ್ಯಕ ಪುಸ್ತಕ ಇದು, ಏಕೆಂದರೆ ಇದು ಕೇವಲ ಕೃಷಿ ಕುರಿತಾಗಿ ಇಲ್ಲ. ನಮ್ಮ ನೆಲಕ್ಕೆ ಪುಕುವೊಕಾರ ತಂತ್ರಗಳನ್ನು ನೇರವಾಗಿ ಇಳಿಸುವುದು ಕಷ್ಟಸಾಧ್ಯವೆಂಬುದು ನಮ್ಮ ಪ್ರಾಜ್ಞ ಓದುಗರಿಗೆ ಅರಿವಾದೀತು. ಆದರೆ ನಮ್ಮ ನೆಲ, ಹವೆ, ಬೆಳೆಗಳನ್ನು ಹೊಸ ಕುತೂಹಲ, ಮುಕ್ತ ದೃಷ್ಟಿ ಮತ್ತು ಸರಿಯಾದ ಕಾಳಜಿಯಿಂದ ಅಧ್ಯಯನ ಮಾಡಿದಲ್ಲಿ ಬಹಳಷ್ಟು ಸಾಧಿಸಬಹುದು ಎಂಬುದನ್ನು ಈ ಗ್ರಂಥ ಕಲಿಸಿಕೊಡುತ್ತದೆ. ಧ್ವನಿತಾರ್ಥ ಮತ್ತು ಸ್ಫೂರ್ತಿ ಎರಡನ್ನೂ ನೀಡುವ ಕೃತಿ ಇದು. ಇದನ್ನು ಓದುವ ರೈತನೊಬ್ಬ ಸತತವಾಗಿ ಈ ಪುಸ್ತಕದಲ್ಲಿಯ ಕೃಷಿಯ ವಿವರಗಳು ತನ್ನ ಹೊಲಗದ್ದೆಗೆ, ಅಲ್ಲಿಂದ ತನ್ನ ಇಡೀ ಕೃಷಿ