Skip to main content

ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMINGTHE

ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMINGTHE

ಮಸನೊಬು ಫುಕುವೊಕ

ಭೂಮಿಯ ಆರೋಗ್ಯ ದಿನ ದಿನಕ್ಕೆ ಹದಗೆಡುತ್ತಿದೆ. ನಿಸರ್ಗವನ್ನು ಬಗ್ಗುಬಡಿದೇ ಅಭಿವೃದ್ಧಿ ಸಾಧಿಸ ಹೊರಟ ಆಧುನಿಕ ಮಾನವನ ದಾಳಿಗೆ ನೆಲ ನಲುಗಿದೆ. ಗಿಜಿಗುಡುವ ೫೦೦ ಕೋಟಿ ಜನರ ಆಸೆ – ದುರಾಸೆಗಳ ಪೂರೈಕೆಗೆಂದು ಗಾಳಿ, ನೀರು, ಮಣ್ಣು, ಅಂತರ್ಜಲವಷ್ಟೇ ಅಲ್ಲ ದೂರದ ಹಿಮಖಂಡಗಳೂ ಕಲುಷಿತವಾಗುತ್ತಿವೆ. ಅಂತರಿಕ್ಷದ ojaನ್ ರಕ್ಷಾ ಕವಚವೂ ಛಿದ್ರವಾಗುತ್ತಿದೆ.

ಇತಿಮಿತಿ ಮೀರಿದ ಈ ಮಾನವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ವಿಚಾರ ಕೆಲವರಲ್ಲಿ ಇದೀಗ ಮೂಡುತ್ತಿರುವಾಗ ೨೫ ವರ್ಷಗಳ ಹಿಂದೆಯೇ ಜ್ಞಾನೋದಯ ಪಡೆದವರು ಜಪಾನಿನ ವಿಜ್ಞಾನಿಕೃಷಿಕ ಮಸನೊಬು ಫುಕುವೊಕ. ಹಾಗೆಂದು ಇವರು ಆಶ್ರಮ ಕಟ್ಟಿಕೊಂಡು ಧ್ಯಾನ ನಿರತರಾಗಿ, ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದವರಲ್ಲ; ಅಥವಾ ಬಾಯಿಮಾತಿನ ಉಪದೇಶ ಸಾರುತ್ತ ಊರೂರು ಸುತ್ತಿದವರಲ್ಲ. ರೋಗಗ್ರಸ್ತ ನಿಸರ್ಗಕ್ಕೆ ಚಿಕಿತ್ಸೆ ನೀಡುತ್ತ, ಉಪಚಾರ ಮಾಡುತ್ತ, ಸಾಂತ್ವನ ಹೇಳುತ್ತ ಕೃಷಿಭೂಮಿಗೆ ಗೆಲುವನ್ನು ತಂದು ಕೊಟ್ಟವರು ಇವರು. ಉಳುಮೆ, ರಸಗೊಬ್ಬರ, ಕೀಟನಾಶಕ ಸಿಂಪರಣೆಯೇ ಮುಂತಾದ ಉಗ್ರ ಬೇಸಾಯ ವಿಧಾನವನ್ನೆಲ್ಲ ಬದಿಗಿಟ್ಟು ಭೂಮಿಯೊಂದಿಗೆ ಮೈತ್ರಿ ಸಾಧಿಸಿದ ಕರ್ಮಯೋಗಿ ಇವರು. ಭೂಮಿಯನ್ನು ಕಾರ್ಖಾನೆಯಂತೆ ಪರಿಗಣಿಸುವ ಬದಲು, ಮಾನವ ಹಸ್ತಕ್ಷೇಪವನ್ನೇ ತೀರ ಕಡಿಮೆ ಮಾಡಿ ಗೆಳತನ ಬೆಳೆಸಿದರೆ ಸಮೃದ್ಧ ಫಲ ಪಡೆಯಲು ಸಾಧ್ಯವೆಂದು ತೋರಿಸಿಕೊಟ್ಟವರು.

ಮಾನವ ಮತ್ತು ನಿಸರ್ಗದ ಮಧ್ಯೆ ಇವರು ಸಾಧಿಸಿದ ಸೌಹಾರ್ದ ಸಂಬಂಧ ಕೇವಲ ಮಾದರಿಯಷ್ಟೇ ಅಲ್ಲ, ಅನುಕರಣೆಗೆ ಅತ್ಯಂತ ಸುಲಭವೂ ಹೌದು. ನಾಲ್ಕು ಸಾವಿರ ವರ್ಷಗಳ ಹಿಂದೆ ರೈತ ಮತ್ತು ಭೂಮಿಯ ಸಂಬಂಧ ಸರಳ ಮತ್ತು ನೇರವಾಗಿತ್ತು. ಸಕಾಲದಲ್ಲಿ ಬೀಜ ಬಿತ್ತುವುದು, ಆಮೇಲೆ ಫಲ ಪಡೆಯುವುದು ಅಷ್ಟೆ. ಆದರೆ ತಾಂತ್ರಿಕ ಸುಧಾರಣೆ ಆದಂತೆಲ್ಲ ರೈತ ಮತ್ತು ಭೂಮಿಯ ಮಧ್ಯೆ ನೂರೊಂದು ಕೊಂಡಿಗಳೂ, ಕ್ಲಿಷ್ಟ ವ್ಯವಸ್ಥೆಗಳೂ ತೂರಿಕೊಂಡಿವೆ. ದೂರ ಸಾಗರದಲ್ಲೆಲ್ಲೋ ಅಟ್ಟಣಿಗೆ

ನಿರ್ಮಿಸಿ, ಕೊಳವೆ ಬಾವಿ ತೋಡಿ, ಕಲ್ಲೆಣ್ಣೆ ತೆಗೆದು, ಸಂಸ್ಕರಿಸಿ ಇನ್ನೆಲ್ಲೋ ಒಯ್ದು ರಸಗೊಬ್ಬರ ತಯಾರಿಸುತ್ತೇವೆ. ಅದನ್ನು ಸಾಗಿಸಿ ತರುವ ರೈಲು ಗಾಡಿಗೆಂದು ಬೇರೆಲ್ಲೋ ಕಲ್ಲಿದ್ದಲು ಅಗೆದು ಉರಿಸುತ್ತೇವೆ. ಮತ್ತೆಲ್ಲೋ ನದಿಗೆ ಒಡ್ಡು ಕಟ್ಟಿ, ಅರಣ್ಯ ಮುಳುಗಿಸಿ, ವಿದ್ಯುತ್ ಉತ್ಪಾದಿಸಿ, ತಂತಿಯ ಮೂಲಕ ಅದನ್ನು ಸಾಗಿಸಿ ತಂದು ರೈತನ ಬಾವಿಯ ನೀರೆತ್ತಲು ಯಂತ್ರ ಜೋಡಿಸುತ್ತೇವೆ. ಈ ಬಗೆಯ ಆಧುನಿಕ ತಂತ್ರ ವ್ಯವಸ್ಥೆ ಹೆಚ್ಚಿದಂತೆಲ್ಲ ರೈತನ ಸ್ವಾತಂತ್ರ್ಯ ಹಂತ ಹಂತವಾಗಿ ಹರಣವಾಗುತ್ತ ಹೋಗುತ್ತದೆ. ಇಂದು ರೈತ ತನಗೆ ಬೇಕೆಂದಾಗ ಉಳುಮೆ ಮಾಡಲಾರ. ಡೀಸೆಲ್ ಪೂರೈಕೆ ಹಾಗೂ ಟ್ರಾಕ್ಟರ್‌ನ ಆರೋಗ್ಯ ಚೆನ್ನಾಗಿದ್ದರೇ ಅವನಿಗೆ ಉಳುಮೆಯ ಸ್ವಾತಂತ್ರ್ಯ. ತನಗಿಷ್ಟ ಬಂದ ಗೊಬ್ಬರ ಹಾಕುವ ಸ್ವಾತಂತ್ರ್ಯ ಕೃಷಿಕನಿಗಿಲ್ಲ. ಏಕೆಂದರೆ ತನಗಿಷ್ಟ ಬಂದ ಬೆಳೆ ತೆಗೆಯುವ ಸ್ವಾತಂತ್ರ್ಯ ಮೊದಲೇ ಇಲ್ಲ. ಈಗಂತೂ ಹೈಬ್ರಿಡ್ ಬೀಜ ಉತ್ಪಾದನೆಯೂ ಬಹುರಾಷ್ಟ್ರೀಯ ಕಂಪನಿಗಳ ಉದ್ಯಮವಾದ ಮೇಲೆ ತನಗೆ ಬೇಕೆಂದ ಬೀಜವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೂ ರೈತ ಕಳೆದುಕೊಳ್ಳುತ್ತಿದ್ದಾನೆ. ಭೂಮಿಯೇ ಒಂದು ಫ್ಯಾಕ್ಟರಿಯಂತಾಗಿ, ಹಸಿರು ಕ್ರಾಂತಿಯ ಹೆಸರಿನಲ್ಲಿ ಕೃಷಿ ಕೆಲಸವೆಲ್ಲ ಯಾಂತ್ರೀಕರಣಕ್ಕೊಳಗಾಗುತ್ತ ಆಗುತ್ತ ಕ್ರಮೇಣ ಕೃಷಿಕನೂ ಯಂತ್ರವಾಗುತ್ತಿದ್ದಾನೆ. ದೂರದ ಯಾರದೊ ಇಚ್ಛೆಗೆ ತಕ್ಕಂತೆ ವರ್ತಿಸುವ ಸೂತ್ರದ ಬೊಂಬೆ ಆಗುತ್ತಿದ್ದಾನೆ.

ಬೇಸಾಯಗಾರನ ಯಾಂತ್ರೀಕರಣ ಹಾಗೂ ವ್ಯವಸಾಯದ ವ್ಯಾಪಾರೀಕರಣ ದಿಂದಾಗುವ ಅನಿಷ್ಟಗಳ ಬಗ್ಗೆ ಕೃಷಿಋಷಿ ಫುಕುವೊಕಾ ಚಿಂತನೆ ನಡೆಸುತ್ತಾರೆ. ಆದ್ದರಿಂದ ಈ ‘ಒಂದು ಹುಲ್ಲಿನ ಕ್ರಾಂತಿ’ ಕೇವಲ ಕೃಷಿಕರ ಕೈಪಿಡಿಯಾಗಿರದೆ ಎಲ್ಲ ಜನರನ್ನೂ ತಟ್ಟಬಲ್ಲ ವಿಚಾರಧಾರೆಯಾಗಿರುತ್ತದೆ. ನಿಸರ್ಗಕ್ಕೆ ಕಡಿವಾಣ ಹಾಕಿ ಕೃಷಿಕನ ಸ್ವಾತಂತ್ರ್ಯಕ್ಕೂ ಕಡಿವಾಣ ಬಿದ್ದ ಮೇಲೆ, ಬಳಕೆದಾರನ ಇಷ್ಟಾನಿಷ್ಟಗಳಿಗೂ ಕಟ್ಟುಪಾಡುಗಳು ಬಂದು, ಆತ ತನ್ನ ಆರೋಗ್ಯವನ್ನೂ ಒತ್ತೆಯಿಡಬೇಕಾದ ಸಾರ್ವತ್ರಿಕ ದುರಂತದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಆದರೂ ಫುಕುವೊಕಾರ ಕೃಷಿ ವಿಧಾನವನ್ನು ಎಲ್ಲ ಕಡೆ ಜಾರಿಗೆ ತರಲು ಸಾಧ್ಯವೇ ಎಂಬ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸುತ್ತಾರೆ. ೧೯೮೮ರ ಮ್ಯಾಗ್ನೆಸೆ ಪ್ರಶಸ್ತಿ ನೀಡಿ ಗೌರಿವಿಸಿದ ವರ್ಷವೇ ಭಾರತಕ್ಕೂ ಫುಕುವೊಕಾರನ್ನು ಕರೆಸಿ ಶಾಂತಿನಿಕೇತನದಲ್ಲಿ ‘ದೇಶಿಕೋತ್ತಮ’ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪ್ರಧಾನಿ ರಾಜೀವ್‌ ಗಾಂಧಿ ಕೂಡ ಅಂಥದೇ ಮಾತು ಹೇಳಿದ್ದರು. ಫುಕುವೊಕಾ ವಿಧಾನದ ನೈಸರ್ಗಿಕ ಕೃಷಿ ಪ್ರಶಂಸನೀಯವಾಗಿದ್ದರೂ ಭಾರತದಲ್ಲಿ ಆಧುನಿಕ ಬೇಸಾಯವನ್ನು ಕೈಬಿಡಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದರು. ಇಂದು ಭಾರತೀಯ ರೈತನ ಹೆಗಲ ಮೇಲೆ ತುಂಬ ದೊಡ್ಡ ಹೊಣೆಗಾರಿಕೆ ಇದೆ. ದೇಶದ ಜನಕೋಟಿಗೆ ಆಹಾರ ಒದಗಿಸುವುದರ ಜತೆಜತೆಗೇ ಸಹಸ್ರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೊಂಡಿರುವ ಭಾರೀ ರಸಗೊಬ್ಬರ ಕಾರ್ಖಾನೆಗಳನ್ನು, ಟ್ರಾಕ್ಟರ್‌ಟಿಲ್ಲರ್ ಕಂಪನಿಗಳನ್ನೂ, ವಿವಿಧೋದ್ದೇಶಗಳ ಬ್ಯಾಂಕ್‌ಗಳನ್ನೂ ಎತ್ತಿಹಿಡಿಯ ಬೇಕಾದ ಜವಾಬ್ದಾರಿ ಅವನ ಮೇಲಿದೆ. ಪರೋಕ್ಷವಾಗಿ

ಇಡೀ ಸಂಪತ್ತನ್ನೂ, ಯೋಜನಾ ಭವನವನ್ನೂ ಎತ್ತಿಹಿಡಿದಿರಬೇಕಾದ ಹೊಣೆ ಅವನದಾಗಿದೆ. ಹಾಗಾಗಿ, ಪ್ರಧಾನಿ ಪಟ್ಟದಲ್ಲಿ ಯಾರೇ ಇದ್ದರೂ ಅವರಿಗೆ ಫುಕುವೊಕಾರ ವಿಧಾನ ದಿಗಿಲು ಹುಟ್ಟಿಸುವುದು ಸಹಜವೇ ಸರಿ.

ಆದರೆ ಇತ್ತ ನಿಸರ್ಗಕ್ಕೆ ಸಹನೆ ಮೀರುತ್ತಿದೆ. ಅತಿ ನೀರಾವರಿ ಒದಗಿಸಿದಲ್ಲಿ ಲವಣಾಂಶ ಶೇಖರಣೆ ಹೆಚ್ಚಾಗಿ ಭೂಮಿ ನಿರುಪಯುಕ್ತವಾಗುತ್ತಿದೆ. ರಸಗೊಬ್ಬರದ ಬಳಕೆ ಹೆಚ್ಚಿದಷ್ಟೂ ಇಳುವರಿ ಕಡಿಮೆಯಾಗತೊಡಗಿದೆ. ಕೀಟನಾಶಕಗಳ ಸಿಂಪರಣೆ ಹೆಚ್ಚಿಸಿದಷ್ಟೂ ಕೀಟಗಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತಿದೆ. ಘಾಟು ರಸಾಯನಗಳ ಬಳಕೆಯಿಂದಾಗಿ ವಿಧವಿಧ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗೆ ಸೇರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ರಸಗೊಬ್ಬರದಲ್ಲಿನ ನೈಟ್ರಸ್ ಆಕ್ಸಾಯಿಡ್ ಭೂಮಿಗೆ ಇಂಗಿ ಅಂತರ್ಜಲ ಕಲುಷಿತವಾಗುತ್ತಿದ್ದರೆ ಅದೇ ರಸಾಯನಿಕಗಳ ಇನ್ನುಳಿದ ಭಾಗ ವಾತಾವರಣಕ್ಕೆ ಸೇರಿ ಭೂಮಿಯ ತಾಪಾಂಶ ಹೆಚ್ಚುತ್ತಿದೆ. ದವಸ ಧಾನ್ಯಗಳಲ್ಲಿ ಕೀಟನಾಶಕಗಳ ಅಂಶ ಅತಿಯಾದುದರ ಬಗ್ಗೆ ಬಳಕೆದಾರರ ಆಕ್ಷೇಪಣೆ ಹೆಚ್ಚುತ್ತಿದೆ. ಕೊಳವೆಬಾವಿಗಳ ಸಂಖ್ಯೆ ಹೆಚ್ಚುತ್ತ ಹೋಗಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿಯುತ್ತಿದೆ. ಅತಿ ನಿರಾವರಿಯನ್ನೇ ಬೇಡುವ ಭತ್ತ ಗೋಧಿಯ ರಾಕ್ಷಸ ಬೀಜಗಳಿಂದಾಗಿ ಒಣಭೂಮಿಯ ಪರಂಪರಾಗತ ಪೈರುಗಳಾದ ಸಜ್ಜೆ, ನವಣೆ, ಉದ್ದು, ಎಳ್ಳು, ಸಾಸಿವೆಗಳು ಮೂಲೆಗುಂಪಾಗುತ್ತ ಬಂದು ಹಳ್ಳಿಗಳಲ್ಲಿ ಅವುಗಳ ಬೀಜವೂ ದುರ್ಲಭವಾಗುತ್ತಿದೆ. ಸುಧಾರಿತ ‘ಉಗ್ರ’ ಕೃಷಿ ವಿಧಾನಕ್ಕೆ ಪ್ರಕೃತಿಯೇ ಪ್ರತಿಭಟನೆ ವ್ಯಕ್ತಪಡಿಸುತ್ತಿದೆ. ಫುಕುವೊಕಾರ ಬಗ್ಗೆ ಗೊತ್ತಿಲ್ಲದಿದ್ದರೂ ನೈಸರ್ಗಿಕ ಬೇಸಾಯ ಪದ್ಧತಿಗೆ ಶರಣು ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ‘ವರ್ಲ್ಡ್ ವಾಚ್’ ಪತ್ರಿಕೆಯ (ನವೆಂಬರ್-ಡಿಸೆಂಬರ್ ೧೯೮೮) ಸಮೀಕ್ಷೆಯ ಪ್ರಕಾರ ಸುಧಾರಿತ ಉಗ್ರಬೇಸಾಯ ಪದ್ಧತಿಯನ್ನು ರೂಢಿಸಿಕೊಂಡ ಅಮೇರಿಕ ರೈತರೂ ಸಹಸ್ರ ಸಂಖ್ಯೆಯಲ್ಲಿ ಜೈವಿಕ ಕೃಷಿ ವಿಧಾನ ಅನುಸರಿಸಲು ತೊಡಗಿದ್ದಾರೆ. ೧೯೮೦ ರವರೆಗೆ ಸುಮಾರು ೩೦ ಸಾವಿರ ರೈತರು ಉಗ್ರ ರಾಸಾಯನಿಕ ಬೇಸಾಯ ಕೈಬಿಟ್ಟಿದ್ದು ಈಗ ಅಂಥವರ ಸಂಖ್ಯೆ ಒಂದು ಲಕ್ಷ ಮುಟ್ಟುತ್ತಿದೆ. ಮೊದಮೊದಲು ಕೇವಲ ಚಿಕ್ಕ ಹಿಡುವಳಿದಾರರು ರಸಗೊಬ್ಬರ ಕೀಟನಾಶಕಗಳಿಗೆ ವಿದಾಯ ಹೇಳುತ್ತಿದ್ದು ಈಗ ೬೦೦-೮೦೦ ಎಕರೆ ಮಾಲಿಕತ್ವ ಇರುವ ದೊಡ್ಡ, ಮಧ್ಯಮ ರೈತರೂ ಹೊಸ ವಿಧಾನಕ್ಕೆ ಮಾರು ಹೋಗುತ್ತಿದ್ದಾರೆ. ಒಂದೂವರೆ ಸಾವಿರ ಎಕರೆ ಜಮೀನುಳ್ಳ ರೈತ ಕೂಡಾ ಯಾವುದೇ ಬಗೆಯ ಕೃತಕ ರಸಾಯನಿಕ ಬಳಸದೇ ಬೆಳೆ ತೆಗೆದಿದ್ದು ಅಮೇರಿಕದಲ್ಲಿ ದಾಖಲೆಯಾಗಿದೆ. ಮಣ್ಣಿಗೆ ಮತ್ತೆ ಜೀವಕಳೆ ತುಂಬಿ, ಎರೆಹುಳ ಜೇಡ ಜೇನ್ನೊಣ ಪಾತರಗಿತ್ತಿಗಳೊಂದಿಗೆ ಸಹ ಬಾಳುವೆ ಮಾಡುತ್ತಲೇ ಬೆಳೆ ತೆಗೆಯಬಹುದಾದ ಪುರಾತನ ಬೇಸಾಯ ಪದ್ಧತಿಯ ಪುನರುತ್ಥಾನವಾಗಬೇಕಾದ ಮಹತ್ತರ ಸಂದರ್ಭದಲ್ಲಿ ಮಸಾನೊಬು ಫುಕುವೊಕ ಅವರ ಈ ಸ್ವಗತಕ್ಕೆ ಮಿತ್ರ ಸಂತೋಷ್ ಕೌಲಗಿಯವರ ಉತ್ಸಾಹದಿಂದಾಗಿ ಕನ್ನಡದಲ್ಲೂ ಬೆಳಕು ಕಾಣುವ ಅವಕಾಶ ಸಿಕ್ಕಿದೆ. ನಗರದ ಥಳಕು ಬೆಳಕಿಗೆ ಒಗ್ಗಿದವರಿಗೆ ಗ್ರಾಮೀಣ ಬದುಕು ಮೊದಮೊದಲು ಅಸಹನೀಯವಾಗಿ

ಕಾಣುವಂತೆ, ಆಧುನಿಕ ಕೃಷಿ ಪದ್ಧತಿಗೆ ಒಗ್ಗಿಹೋದ ಭೂಮಿಯಲ್ಲಿ ಫುಕುವೊಕಾ ವಿಧಾನವನ್ನು ಒಮ್ಮೆಗೇ ಆಚರಣೆಗೆ ತರಲು ಕಷ್ಟವೇನೋ ನಿಜ. ಆದರೆ ಸಾಂಪ್ರದಾಯಿಕ ಕೃಷಿ ಪದ್ಧತಿ ನಮ್ಮಲ್ಲಿನ್ನೂ ಪೂರ್ತಿ ಅಳಿಸಿ ಹೋಗಿಲ್ಲವಾದ್ದರಿಂದ ಈ ಲೇಕನಿ ಅತ್ಯಂತ ಸಕಾಲಿಕವಾಗಿದೆ. ಓದು ಬರಹಕ್ಕೆ ಪುರುಸೊತ್ತೇ ಇಲ್ಲದ ರೈತನಿಗೆ ಕೃಷಿ ಕಾರ್ಯದಿಂದ ಬಿಡುಗಡೆ ಹೊಂದುವ ವಿಧಾನವನ್ನು ಇಲ್ಲಿ ಹೇಳಲಾಗಿದೆ. ಅಲ್ಪಸ್ವಲ್ಪವೇ ಓದು ಬಲ್ಲ ರೈತರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಸರಳ ಶೈಲಿಯಲ್ಲಿ ವಿಚಾರ ನಿರೂಪಣೆ ಮಾಡಲಾಗಿದೆ. ಅಷ್ಟಕ್ಕೂ ಇಲ್ಲಿನ ವಿಚಾರಗಳು ರೈತರಿಗಷ್ಟೇ ಅಲ್ಲ ‘ಮಣ್ಣಿನ ವಾಸನೆ’ಯಲ್ಲಿ ಅಭಿರುಚಿ ಇರುವ ಎಲ್ಲರಿಗೂ ತೀರ ಪ್ರಸ್ತುತವಾಗಿವೆ.

Popular posts from this blog

ಜೇನು ಸಾಕಾಣಿಕೆ

ಜೇನು ಸಾಕಾಣಿಕೆ ತೋಟಗಾರಿಕೆ ಬೆಳೆಗಳಲ್ಲಿ ಪರಾಗ ಸ್ಪರ್ಶವನ್ನು ಹೆಚ್ಚಿಸಲು ಜೇನುಕಲ್ಲು ಜೇನುಪೆಟ್ಟಿಗೆ ಹಾಗೂ ಜೇನುಗಾರಿಕೆಗೆ  ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇಕಡ 40ರಂತೆ 1600 ಜೇನು ಕಾಲೋನಿ ಮತ್ತು ಜೇನುಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8000 ರೂ ವರೆಗೆ ಸಹಾಯಧನ ನೀಡಲಾಗುತ್ತದೆ.

ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ?

 Organic Farming: ಸಾವಯವ ಕೃಷಿ ಬಗ್ಗೆ ನಿಮ್ಗೂ ಕಲೀಬೇಕಾ? ಹಾಗಿದ್ರೆ ಕೃಷಿ ವಿಜ್ಞಾನ ಕೇಂದ್ರವೇ ತರಬೇತಿ ನೀಡ್ತಿದೆ ನೋಡಿ ಆದರೆ ಈಗ ಕೃಷಿ ವಿಜ್ಞಾನ ಕೇಂದ್ರವು ಸಮಸ್ಯೆಯನ್ನು ಪರಿಹರಿಸಿರುವುದರಿಂದ ಅವರು ಚಿಂತಿಸುವ ಅಗತ್ಯವಿಲ್ಲ. ದೇಶಾದ್ಯಂತದ ವಿವಿಧ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಗಳು ಸಾವಯವ ಕೃಷಿ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿವೆ. ಸಾವಯವ ಕೃಷಿಯ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಉಳ್ಳವರು ಮತ್ತು ಕಲಿಯಲು ಬಯಸುವ ರೈತರು ತಮ್ಮ ಹತ್ತಿರದ ಕೆವಿಕೆಯನ್ನು ಸಂಪರ್ಕಿಸಬಹುದು. ಸಾಮಾನ್ಯವಾಗಿ ನಮ್ಮ ಹಿರಿಯ ರೈತರು ಹಳೆಯ ವ್ಯವಸಾಯ ಪದ್ದತಿಗಳನ್ನೇ ಅನುಸರಿಸಿಕೊಂಡು ಕೃಷಿಯನ್ನು (Agriculture) ಮಾಡುತ್ತಿರುತ್ತಾರೆ ಮತ್ತು ವರ್ಷಕ್ಕೆ ಒಂದೆರಡು ಬೆಳೆಗಳನ್ನು (Crops) ಅವರ ಹೊಲದಲ್ಲಿ ಬೆಳೆದು ಕೃಷಿ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಚೆನ್ನಾಗಿ ಓದಿಕೊಂಡು ಕೃಷಿಯನ್ನು ಮಾಡಲು ಶುರು ಮಾಡಿರುವ ಯುವಕರು ಈ ಹಳೆಯ ಕೃಷಿ ಪದ್ದತಿಯನ್ನು (Old farming system) ಬಿಟ್ಟು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಒಂದೆರಡು ಬೆಳೆಗಳನ್ನು ನಂಬಿಕೊಂಡು ಕೂರದೇ ಅನೇಕ ರೀತಿಯ ಬೆಳೆಗಳನ್ನು ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದಿನದಿಂದ ದಿನಕ್ಕೆ ಸಾವಯವ ಕೃಷಿಯು (Organic Farming) ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಆದರೆ ಅನೇಕ ರೈತರು ಇನ್ನೂ ಈ

ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMING JAPANESE FAMOUS BOOK

  ಈ ಲೇಖವನ್ನು   ಕೃಷಿಯ ಬಗ್ಗೆ    ಎಂದು ನಿರೀಕ್ಷಿಸಿದವರಿಗೆ ಇದು ಆಹಾರ, ಆರೋಗ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತಾಗಿರುವ ಗ್ರಂಥವೆಂದು ಕಂಡುಬಂದರೆ ಆಶ್ಚರ್ಯವಿಲ್ಲ. ತಾತ್ವಿಕ ವಿಚಾರಧಾರೆ ಎಂಬ ವದಂತಿ ಕೇಳಿ ಈ ಬ್ಲಾಗ್  ಹುಡುಕುವವರಿಗೆ ಇಲ್ಲಿ ತರಕಾರಿ, ಭತ್ತ, ಕಿತ್ತಳೆ ಬೆಳೆಯ ಕುರಿತ ವಿವರಗಳೂ ಕಂಡುಬಂದಾವು. ಈ ರೂಢಿಗತ ನಿರೀಕ್ಷೆಯ ಕಾರಣದಿಂದಲೇ ಈ ಲೇಕಾನಿ ಗಮನಾರ್ಹ. ಏಕೆಂದರೆ ನಾವು ಸಾಧಕರನ್ನು ವಿಶೇಷಜ್ಞರೆಂದೂ, ಒಂದು ಪುಸ್ತಕ ಒಂದೇ ವಿಷಯವನ್ನು ಕುರಿತಾಗಿರುತ್ತದೆಂದೂ ನಿರೀಕ್ಷೆಯಲ್ಲಿ ಬೆಳೆದಿದ್ದೇವೆ. 'ಒಂದು ಹುಲ್ಲಿನ ಕ್ರಾಂತಿ* ಏಕಕಾಲಕ್ಕೆ ಪ್ರಾಯೋಗಿಕ ಮಹಿಮೆ ಮತ್ತು ತಾತ್ವಿಕ ವಿಚಾರಧಾರೆಗಳೆರಡನ್ನೂ ಹೆಣೆದುಕೊಂಡಿದೆ. ಕೃಷಿ ಕುರಿತಾದ ಅತ್ಯಾವಶ್ಯಕ ಪುಸ್ತಕ ಇದು, ಏಕೆಂದರೆ ಇದು ಕೇವಲ ಕೃಷಿ ಕುರಿತಾಗಿ ಇಲ್ಲ. ನಮ್ಮ ನೆಲಕ್ಕೆ ಪುಕುವೊಕಾರ ತಂತ್ರಗಳನ್ನು ನೇರವಾಗಿ ಇಳಿಸುವುದು ಕಷ್ಟಸಾಧ್ಯವೆಂಬುದು ನಮ್ಮ ಪ್ರಾಜ್ಞ ಓದುಗರಿಗೆ ಅರಿವಾದೀತು. ಆದರೆ ನಮ್ಮ ನೆಲ, ಹವೆ, ಬೆಳೆಗಳನ್ನು ಹೊಸ ಕುತೂಹಲ, ಮುಕ್ತ ದೃಷ್ಟಿ ಮತ್ತು ಸರಿಯಾದ ಕಾಳಜಿಯಿಂದ ಅಧ್ಯಯನ ಮಾಡಿದಲ್ಲಿ ಬಹಳಷ್ಟು ಸಾಧಿಸಬಹುದು ಎಂಬುದನ್ನು ಈ ಗ್ರಂಥ ಕಲಿಸಿಕೊಡುತ್ತದೆ. ಧ್ವನಿತಾರ್ಥ ಮತ್ತು ಸ್ಫೂರ್ತಿ ಎರಡನ್ನೂ ನೀಡುವ ಕೃತಿ ಇದು. ಇದನ್ನು ಓದುವ ರೈತನೊಬ್ಬ ಸತತವಾಗಿ ಈ ಪುಸ್ತಕದಲ್ಲಿಯ ಕೃಷಿಯ ವಿವರಗಳು ತನ್ನ ಹೊಲಗದ್ದೆಗೆ, ಅಲ್ಲಿಂದ ತನ್ನ ಇಡೀ ಕೃಷಿ